Sunday, March 18, 2012

ನಿನ್ನೊಂದಿಗಿನ ಆ ನೆನಪುಗಳು...

ಅಂದು ನೀ ನೀಡಿದ
ಪ್ರೀತಿಗೆ ಮರುಳಾದ
ನನಗೆ ಇಂದು
ಉಳಿದಿರುವುದು
ಮಾಸದ ನೆನೆಪುಗಳಷ್ಟೇ ..
ಅಂದು ಭಾವನೆಗಳಿಗೆ
ನೀ ಹಚ್ಚಿದ ಬಣ್ಣಗಳು
ಇಂದಿಗೂ  ಹೊಸತಾಗಿಯೇ
ಹೊಳೆಯ್ತುತಿವೆ...
ಅಂದು ನೀ ನನ್ನೊಟ್ಟಿಗೆ
 ಕಟ್ಟಿದ  ಕನಸುಗಳು
ರೆಕ್ಕೆ ಮುರಿದ ಹಕ್ಕಿಯಂತಾಗಿದೆ.. 
ಅಂದು ನೀನಾಡಿದ
ಒಂದೊಂದು ಮಾತುಗಳು
ನನ್ನೆದೆಯಲಿ ಶೂಲದಂತೆ
ಚ್ಹುಚ್ಚುತಿವೆ....
ಬದುಕುವ ಒಂದಿಂಚು
ಆಸೆಯು ನನ್ನಲ್ಲಿ
ಉಳಿದಿಲ್ಲ.. ಆದರೂ
ನನ್ನ ಉಸಿರು ನಿಂತಿರುವುದೇ
ನಿನಗಾಗಿ ನೀ ಬಂದೆ ಬರುವೆಯೆಂಬ
 ಹುಸಿ ಹಂಬಲಿಕೆಗಾಗಿ....