ಘೋರ ನಾ ಬಲ್ಲೆ
ನೆನಪುಗಳ ಭೂತ
ಕಾಡಬಹುದು
ಭಯ ಬೇಡ
ಅಣಕಿಸುವ ತೋಳುಗಳು
ಊಳಿಡಬಹುದು ಮರು ಮಾತನಾಡದೇ ಕಾದಿರು
ಅಗಲಿಕೆಯ ಚಳಿ ಚುಚ್ಚಬಹುದು
ಚಿಂತೆ ಬೇಡ .
ಕತ್ತಲಿದು ಬಾಳಿನದು
ಸರಿವುದು ನಾ ಬಲ್ಲೆ
ಹೆದರದಿರು ಎಡವದಿರು
ಬಿಡ ಬೇಡ ಉಸಿರು ಸೋತೆ
ನಾನೆನುತ
ಉದಯಿಸುವ ಉಲ್ಲಾಸದುಜ್ವಲ
ಪ್ರಜ್ವಲ ಜೀವ ಚೇತನದ ರವಿಯು
ಇನ್ನು ಪ್ರೇಮ ಶಕೆಯು
ಚಳಿ ಬಾಗುತ್ತಲೇ
ಚಿಗುರು ಚೈತ್ರವು
ಕೇಳು ಹೇಳುವೆನು ಮತ್ತೆ
ಕತ್ತಲಿದು ಬಾಳಿನದು ಬೆಳಕಗುವುದಿದೆ.....

simply superb.
ReplyDeleteiam amused..., mesmerized...stunned...!
Thank you so much....
ReplyDeletenice!!
ReplyDeleteಹೇ... ಇದು ತುಂಬಾ ಚೆನ್ನಾಗಿದೆ ಪ್ರಿಯಾ... ತುಂಬಾ ಆಶಾದಾಯಕ ಕವನ..
ReplyDeleteThank u very much sir!!!!!!
ReplyDelete