Thursday, December 2, 2010

ಏಕೆ ???????

ಏಕೆ ???????

ಗೆಳೆಯ ಮುಖದಲ್ಲಿ ಕಿರು ನಗೆಯ ಹೊತ್ತು
ಮನದಾಳದ ಕನಸಿನ ಲೋಕಕೆ
ವಲಸೆ ಬಂದು ನೆಲೆಸಿರುವೆಯೇಕೆ?
ಓರೆ ನೋಟದ ಪ್ರೀತಿಯ ಮಾತಿನಿಂದ
ಅಂತರಂಗದ ರಂಗಮಂದಿರದಲಿ
ನಾಟ್ಯ ಮಯುರನಾಗಿ ನರ್ರ್ತಿಸುತಿರುವೆಏಕೆ?

ಹೃದಯವೆಂಬ ಭಾವನೆಗಳ ಸಾಮ್ರಾಜ್ಯದ
ಅನಭಿಷಕ್ತ ರಾಜನಾಗಿ, ಪದೇ,ಪದೇ
ನಿನ್ನ ನೆನಪು ಬರುವಂತೆ ಆಜ್ನಪಿಸುತಿರುವೆಯೇಕೆ?

ಮೂಡಣದ ರವಿಯಂತೆ ಬೆಳಕಾಗುವುದ ಬಿಟ್ಟು 
ಪ್ರೇಮವೆಂಬ ಕರ್ಗತಲ ಕಾನನನದಲ್ಲಿ ಒಬ್ಬೊಂತ್ತಿಯನ್ನಗಿಸಿ 
ದೂರದಲ್ಲಿ ನಿಂತು ಮಂದಹಾಸ ಬೀರುಥಿರುವೆಯೇಕೆ?

ಪಕ್ಷಿಗಳ ಇನ್ಚರದನ್ಥಿರುವ ನಿನ್ನ ದನಿಯ
ಮಾದುರ್ಯಕೆ ಮರುಳಾಗುವಂತೆ ಮಾಡಿ
ಮುಗ್ದನಂತೆ ಮೌನಿಯಾಗಿರುವೆಏಕೆ?

ಬಾನಗಳದಿ ಚಿತ್ಹಾರದ ನಕ್ಷತ್ರಗಂತೆ 
ನಿನ್ನ ಮನದ ಅಕ್ಷರಗಳಿಂದ ಆಕರ್ಶಿಸಿ
ಆ ಚಂದಿರನಂತೆ ಆಗಾಸದಿಂದ ನೋಡಿ ಕೇಕೆ ಹಾಕುತಿರುವಿಯೆಕೆ ?

ಈ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ
ಹೋಗದೆ ಪ್ರೀತಿಯ ಮಧುರ
ಭಾವನೆಗಳೆಂಬ ಸಂಕೋಲೆಯಲ್ಲಿ ಬಂದಿಸಲ್ಪತ್ತಿರುವೆಯೇಕೆ?-----
Priya

3 comments:

  1. ನಿಮ್ಮ ಮನದ ಭಾವಗಳಿಗೆ ಅಕ್ಷರವಾಗಿ ಹೊರ ಹೋಗುವ ಹಂಬಲ..ಅಂಬೆಗಾಲಿಡಲು ಕಲಿತ ಮಗು ಮನೆ ಅಂಗಳವ ದಾಟಲು ಹಂಬಲಿಸುವಂತಿವೆ. ಮನದ ಭಾವಗಳು ಕೂಡ ರೂಪ ರೂಪಕವಾಗಿ ಬಣ್ಣವ ಪಡೆದಿವೆ ಏನೋ ಹೊಸತನ ಪಡೆದಿವೆ ಆ ಭಾವಗಳು...ಬರೆಯುತ ಸಾಗಲಿ ನಿಮ್ಮ ಭಾವಯಾನ ಅನವರತ....

    ReplyDelete