Wednesday, June 15, 2011

ನಲ್ಲಾ ಆ ನಿನ್ನ ಒಂದು ನಗೆ

ನಿನ್ನ ಕಳ್ಳ ನಗೆಯ ಹಿಂದೆ 
ನನ್ನ ಬದುಕಿನ
 ಹಲವು ನೋವುಗಳ ಸಮ್ಮಿಲನವಿದೆ!

ನಿನ್ನ ಗುಳಿ ಬೀಳುವ ಕೆನ್ನೆಗಳ ಸುಳಿಯಲ್ಲಿ 
ನನ್ನ ಬದುಕಿನ ಗುರಿಗಳು ಸೋನ್ನೆಯಾಗಿ 
ಸುತ್ತುತ್ತಿರುವ ಪರಿ ಹಾಸ್ಯವಿದೆ!!

ನೀನಿಟ್ಟ ಲಜ್ಜೆಭರಿತ ಹೆಜ್ಜೆಗಳ ಹಾದಿಯಲ್ಲಿ
ನನ್ನ ಹಾದಿ ತಪ್ಪಿದ ಬದುಕಿನ
ಸ್ಪಷ್ಟ  ಗುರುತುಗಳಿವೆ !!

ನಿನ್ನ ಆಸೆ ಪಟ್ಟಿರುವ ಕಣ್ಣುಗಳ ಆಳದಲ್ಲಿ 
ನನ್ನ ನಿದ್ರೆ ಬಾರದ ರಾತ್ರಿಗಳಿಗೊಂದು
ಸೂಕ್ತ ಕಾರಣವಿದೆ !

ನಿನ್ನ ರೂಪ , ಪ್ರೀತಿ ತುಂಬಿರುವ
ನನ್ನ ಹೃದಯದಲ್ಲಿ ನನ್ನದೇ ಬದುಕಿನ
ಭಗ್ನ ಇತಿಹಾಸ ಅಡಗಿದೆ !!

ನೀನು ನನ್ನೊಂದಿಗೆ ಹೇಳಿಕೊಳ್ಳದಿದ್ದರೂ 
ನಾನು ನಿನ್ನೊಂದಿಗೆ ಮಾತನಾಡದಿದ್ದರೂ
ನಿನ್ನ ಕಣ್ಣಿನ ನೋಟದೊಳಗಿನ
ಬೆಳಕಿನಾಳದ ಸಮುದ್ರದಗಲದ
ವೇದನೆಯ ಹಿಂದಿನ" ವಿರಹ " ದ 
ಅರ್ಥ ಕಂಡಿತ ನನಗಾಗಿದೆ !!!

4 comments:

  1. nice poem. this is good one than the rest that you had written. keep it up.

    ReplyDelete
  2. ತುಂಬಾ ಚೆನ್ನಾಗಿದೆ... ನೀನಿಟ್ಟ ಲಜ್ಜೆಭರಿತ ಹೆಜ್ಜೆಗಳ.... ಸ್ಪಷ್ಟ ಗುರುತುಗಳಿವೆ.. ಸಾಲು ತುಂಬ ಸೊಗಸಾಗಿ ಬರೆದಿದ್ದೀರಿ. ಖುಷಿ ಆಯ್ತು ಓದಿ

    ReplyDelete